ನೀವು ಹೇಗೆ ಮುಷ್ಟಿ ಕಟ್ತೀರಿ?

ಮಾತಾಡ್ತಾ ಮಾತಾಡ್ತಾ ಮಾತಿನ ಜೊತೆ ಮನಸ್ಸಿನಲ್ಲಿರೋ ಭಾವನೆಗಳನ್ನ ಹೊರ್ಗಡೆ ಹಾಕಕ್ಕೆ ಕೈ ಅಲ್ಲಾಡ್ತೀವಿ, ಮುಖ ಮಾಡ್ತೀವಿ ಹಾಗೆ ಮುಷ್ಟಿ ಕೂಡ ಒಮ್ಮೊಮ್ಮೆ ಹಿಡೀತೀವಿ ಅಲ್ವಾ?
ಹಾಗಾದ್ರೆ ಒಂದೇ ಒಂದ್ ಸಲ ಈಗ ಮುಷ್ಟಿ ಕಟ್ಟಿ ನೋಡೋಣ!!! ಯಾವ ತರ ಮುಷ್ಟಿ ಕಟ್ಟಿದ್ರೀ? ನಂಬರ್ ಕ್ಲಿಕ್ ಮಾಡಿ ಕೆಳಗಡೆ ಅದಕ್ಕೆ ಸರ್ಯಾಗಿ ನಿಮ್ಮ ವ್ಯಕ್ತಿತ್ವ ಏನು ಅಂತ ಕೊಟ್ಟಿದ್ದೀವಿ. ಓದಿ.

Antekante.com
Created by Antekante.com (User Generated Content*)User Generated Content is not posted by anyone affiliated with, or on behalf of, Playbuzz.com.
On Oct 25, 2016

ನೀವು ಹೇಗೆ ಮುಷ್ಟಿ ಕಟ್ತೀರಿ?

ನೀವು ಬೇರೇಯೋರ್ಗೆ ಸದಾ ಸಹಾಯ ಮಾಡೋಂಥ ವ್ಯಕ್ತಿ

ನೀವು ಬೇರೇಯೋರ್ಗೆ ಸದಾ ಸಹಾಯ ಮಾಡೋಂಥ ವ್ಯಕ್ತಿ

ಚಿಕ್ಕ ಚಿಕ್ಕ ವಿಷ್ಯಕ್ಕೆಲ್ಲಾ ನೀವು ಮನಸ್ಸು ಕೆಡಿಸಿಕೊಳ್ಳೊರು ಅಲ್ಲ. ನಿಮ್ಮನ್ನ ಜನ ಅವರ ಕೆಲ್ಸಕ್ಕೆ ಚೆನ್ನಾಗಿ ಉಪ್ಯೋಗ್ಸ್ಕೊತಾರೆ. ಇದು ನಿಮ್ಗೂ ಗೊತ್ತು. ಆದ್ರೂ ನೀವು ಅವರಿಗೆ ಸಹಾಯ ಮಾಡಕ್ಕೆ ಸದಾ ರೆಡಿ ಇರ್ತೀರಿ. ನಿಮ್ಗೆ ತೊಂದ್ರೆ ಆದ್ರೂ ಪರ್ವಾಗಿಲ್ಲ ಬೇರೆಯೋರ್ಗೆ ಸಹಾಯ ಮಾಡ್ತೀರಿ.
ಜೀವನದಲ್ಲಿ ಹೊಸಾದು ಕಲೀಬೇಕು, ಹೊಸಾದೇನಾದ್ರೂ ಮಾಡ್ಬೇಕು ಅನ್ನೋ ಉತ್ಸಾಹ ನಿಮ್ಮಲ್ಲಿ ತುಳುಕ್ತಿರತ್ತೆ.
ಸ್ವಲ್ಪ ತಾಳ್ಮೆ ಕಡಿಮೆ ಆದ್ರೆ ಏನ್ ಕೆಲ್ಸ ಬೇಕಾದ್ರೂ ಮಾಡೇ ಮಾಡ್ತೀನಿ ಅಂತೀರಿ. ಒಂಚೂರು ಭಯ ತೋರ್ಸ್ಕೊಳಲ್ಲ ನೀವು ಅದಕ್ಕೆ ಜನ ನಿಮ್ನ ಡೇರ್ ಡೆವಿಲ್ಸ್ ಅಂತ ಕರೀಬೋದು. ಆದ್ರೆ ನೀವು ಒಳಗೆಡೆ ಎಷ್ಟು ಭಯಸ್ಥರು, ನಿಮ್ಗೆ ಎಷ್ಟೊ ಸಲ ನಿಮ್ ಹತ್ರದೋರಿಂದ ಅನುಕಂಪ, ಪ್ರೀತಿ ಎಲ್ಲಾ ಬೇಕು ಅಂತ ಯಾರಿಗೂ ಗೊತ್ತಾಗಲ್ಲ.
ನಿಮ್ಗೆ ನಿಮ್ ಮನಸಿನ ಭಾವನೆಗಳನ್ನ ಹೊರ್ಗಡೆ ಸರ್ಯಾದ್ ರೀತೀಲಿ ಹೇಳ್ಕೊಳಕ್ಕೆ ಬರಲ್ಲ. ಅರ್ಧಂಭರ್ಧ ಹೇಳ್ಕೊತೀರಿ. ನೀವು ತುಂಬಾ ಇಷ್ಟ ಪಡೋರ್ ಹತ್ರಾನೂ ನಿಮ್ಗೆ ನಿಮ್ಮ ಪ್ರೀತೀಲಿ ಬರೀ 30% ಮಾತ್ರ ಪ್ರೀತಿ ತೋರ್ಸ್ಕೊತೀರಿ ಆದ್ರೆ ಅಂತರಾಳದಲ್ಲಿ ನೀವು ಅವ್ರನ್ನ ಅದಕ್ಕಿಂತ ತುಂಬಾ ತುಂಬಾ ಹೆಚ್ಚಾಗಿ ಪ್ರೀತಿಸ್ತೀರಿ.

ನೀವು ನಿಜವಾಗ್ಲೂ ತುಂಬಾ ಕ್ರಿಯೇಟಿವ್ ವ್ಯಕ್ತಿ

ನೀವು ನಿಜವಾಗ್ಲೂ ತುಂಬಾ ಕ್ರಿಯೇಟಿವ್ ವ್ಯಕ್ತಿ

ಸಕತ್ ಮಿಂಚಿಂಗ್ ವ್ಯಕ್ತಿತ್ವ ನಿಮ್ಮದು. ಕ್ರಿಯೇಟಿವ್ ಹಾಗೂ ಸ್ಪೆಶಲ್ ಟಾಲೆಂಟ್ ಇರೋರು. ಓಪನ್ ಆಗಿ ಮಾತಾಡ್ತೀರಿ, ಅದ್ರಿಂದ ಜನ ನಿಮ್ಗೆ ಅಟ್ಟ್ರಾಕ್ಟ್ ಆಗ್ತಾರೆ. ನೀವು ಪ್ರಾಮಾಣಿಕರು, ತೀಕ್ಷ್ಣ ಮನಸ್ಸಿನವರು ಅಷ್ಟೆ ಬುದ್ದಿವಂತರು. ನಿಮ್ಮ ಈ ಗುಣ ಫ್ರೆಂಡ್ಸ್ಗೆ ಬಾಳ ಲೈಕ್ ಆಗತ್ತೆ. ಅವ್ರ ಮಧ್ಯ ನೀವೇ ಲೀಡರ್.
ಚಿಕ್ಕ ಚಿಕ್ಕ ಕೆಲ್ಸ ಮಾಡಕ್ಕೆ ನಿಮ್ಗೆ ಆತ್ಮವಿಶ್ವಾಸದ ಕೊರತೆಯಿಲ್ಲ. ಆದ್ರೆ ಏನಾದ್ರೂ ದೊಡ್ಡ ಕಲ್ಸಕ್ಕೆ ಕೈ ಹಾಕ್ಬೇಕಾದ್ರೆ ಎಲ್ಲಿ ಸೋಲ್ತಿನೋ ಅಂತ ಭಯ ಜಾಸ್ತಿ. ಅಂಥಾ ಸಂದರ್ಭದಲ್ಲಿ ನಿಮ್ಗೆ ಯಾರಾದ್ರೂ ಬೆನ್ನು ತಟ್ಟೋರು ಬೇಕೇ ಬೇಕು.

ನೀವು ಎಲ್ಲರಿಗೂ ತುಂಬಾ ಇಷ್ಟವಾಗೋ ವ್ಯಕ್ತಿ

ನೀವು ಎಲ್ಲರಿಗೂ ತುಂಬಾ ಇಷ್ಟವಾಗೋ ವ್ಯಕ್ತಿ

ನೀವು ಮಹಾನ್ ಬುದ್ಧಿವಂತರು ಹಾಗೆ ಯಾವ ವಿಷ್ಯದ ಬಗ್ಗೆನಾದ್ರೂ ಸರಿ ನಿರರ್ಗಳವಾಗಿ ಮಾತಾಡೊರು. ಆದ್ರೆ ಸ್ವಲ್ಪ ನಾಚಿಕೆ ಸ್ವಭಾವದೋರು. ಇದ್ರಿಂದ ನಿಮ್ಮ ಬುದ್ದಿವಂತಿಕೆಜನರ ಕಣ್ಣಿಗೆ ಸಾಕಷ್ಟು ಬೀಳಲ್ಲ. ಅವ್ರಿಗೆ ನೀವು ಕಡಿಮೆ ಮಾತಾಡೋರು ಅಥವಾ ಮಾತಾಡಕ್ಕೇ ಇಷ್ಟಪಡದೇ ಇರೋರು, ಸಕತ್ ಸ್ಟ್ರಿಕ್ಟ್ ಮನುಷ್ಯ ಅಂತ ಅನ್ನ್ಸತ್ತೆ.
ಯಾವುದೇ ಕೆಲ್ಸ ಮಾಡೋ ಮುಂಚೆ ಸಕತ್ ಯೋಚ್ನೆ ಮಾಡ್ತೀರಿ. ಕೆಲ್ಸ ಸರ್ಯಾಗಿ ಆಗ್ಲೇಬೇಕು ಅಂತ ನಿಷ್ಟೂರವಾಗಿ ನಿಮ್ಗೆ ನೀವೇ ಗೆರೆ ಎಳ್ಕೊತೀರಿ. ಈತರದ ಸ್ವಭಾವದಿಂದ ಕೆಲ್ಸ ಮುಗಿಯೋ ತನಕ ಆತಂಕದಲ್ಲಿ ಒದ್ದಾಡ್ತೀರಿ.
ಜೀವನದಲ್ಲೇ ಇಂಥದ್ದು ಅಂತ ಒಂದು ನಿರ್ದಿಷ್ಟ ಗುರಿ ಇಟ್ಕೊಂದಡಿರ್ತಿರಿ. ಹಾಗೆ ಜೀವನ ಮಾಡ್ತೀರಿ. ನಿಮ್ಮ ಹತ್ರದೋರು ನಿಮ್ ಜೊತೆ ಇರಕ್ಕೆ ಇಷ್ಟಪಡ್ತಾರೆ. ಆದ್ರೆ ಹೊಸಬರು ಮೊದ್ಲು ಮೊದ್ಲು ನಿಮ್ನ ಕಂಡ್ರೆ ಹೆದರ್ಕೊತಾರೆ. ನೀವು ಯಾರು ನಿಮ್ಮ ವ್ಯಕ್ತಿತ್ವ ಏನು ಅಂತ ಸ್ವಲ್ಪ ಪರಿಚಯ ಆದ ಮೇಲೆ ಧೈರ್ಯವಾಗಿ ನಿಮ್ ಹತ್ರ ಬರ್ತಾರೆ. ಒಂದೊಂದ್ಸಲ ಇದ್ರಿಂದ ನಿಮ್ಗೇ ಬೇಜಾರಾಗತ್ತೆ. ಆದ್ರೂ ನೀವೇನು ಅದನ್ನ ಮನಸ್ಸಿಗೆ ತೊಗೊಳಲ್ಲ.

These are 10 of the World CRAZIEST Ice Cream Flavors
Created by Tal Garner
On Nov 18, 2021